
ಪದ್ಮಪುರಾಣದ ಕಥೆಗಳು ಪಟ್ಟಾಭಿಷಿಕ್ತನಾದ ಈ ರಾಜನಿಗೆ ತನ್ನ ಪೂರ್ವಜನ್ಮದ ಸ್ಮರಣೆ ಇದ್ದೇ ಇತ್ತು. ಅನೇಕರಿಗೆ ಕೆಸರನ್ನು ದಾಟಲು ಸಹಾಯ ಮಾಡಿದ್ದರಷ್ಟರಿಂದಲೇ ತಾನು ಈಗ ರಾಜನಾಗಿರುವೆ ಎಂಬುದು ಅವನ ಗಮನದಲ್ಲಿತ್ತು. ಅಂತೆಯೇ ಅವನು ಈಗ ತನ್ನ ರಾಜ್ಯದಲ್ಲಿ ಹತ್ತಾರು ಸೇತುವೆಗಳನ್ನು ಕಟ್ಟಿಸಿ ಜನಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದನು. ಅನೇಕ ಆಣೆಕಟ್ಟುಗಳನ್ನು ಕಟ್ಟಿಸಿದನು. ಅಲ್ಲಲ್ಲಿ ಬಾವಿ, ಕೆರೆ, ಕೊಳಗಳನ್ನು ನಿರ್ಮಿಸಿದನು. ಕೈದೋಟಗಳನ್ನೂ ಅರವಟ್ಟಿಗೆಗಳನ್ನೂ ಆರಂಭ ಮಾಡಿದನು. ಯಜ್ಞಗಳನ್ನು ಮಾಡಿಸಿದ್ದಲ್ಲದೆ ಕೊಡುಗೈಯಿಂದ ದಾನಗಳನ್ನೂ ನೀಡಿದನು. ಹಿಂದೆ ಒಬ್ಬ ಕಳ್ಳನಿದ್ದನು. ಒಮ್ಮೆ ಅವನು […]