ದೇವರೆಂದರೆ ಅಂತರಂಗದ ಕತ್ತಲನ್ನು ಓಡಿಸುವ ಬೆಳಕು. ನಾವು ದೇವರನ್ನು ನಂಬಬೇಕಿರುವುದು ನಮ್ಮೊಳಗಿನ ಭಯವನ್ನು ಗೆಲ್ಲುವುದಕ್ಕಾಗಿ, ನಮ್ಮೊಳಗಿನ ಬೆಳಕಿನ ಶಕ್ತಿಯನ್ನು ಅರಿಯುವುದಕ್ಕಾಗಿ ಎಂಬುದನ್ನು ನಮ್ಮ ಮಕ್ಕಳಿಗೆ ಮನವರಿಕೆ ಮಾಡದೇ ಹೋದರೆ ಕೇರಳ ಸ್ಟೋರಿಯ ನಾಯಕಿಯರಂತೆ ನಮ್ಮ ದೇವರ ಬಗ್ಗೆ ಯಾರೋ ಏನೋ ಆಡಿದರೂ ಮಾರುತ್ತರ ಕೊಡಲಾಗದ ಅಸಹಾಯಕ ಸ್ಥಿತಿಗೆ ಅವರನ್ನು ನಾವೇ ನೂಕಿದಂತಾದೀತು. ದೇವರನ್ನು ಕಣ್ಣಾರೆ ಕಾಣಲಾಗುವುದಿಲ್ಲ ಎಂದ ಅವರನ್ನು ನಂಬುವುದು ಹೇಗೆ, ಯಾಕೆ ಎಂಬ ಪ್ರಶ್ನೆಗಳು ಇಂದು ನಿನ್ನೆಯವಲ್ಲ. ಇದ್ದಾನೆ ಎನ್ನುವವರ ಬಣ, ಇಲ್ಲವೇ ಇಲ್ಲ ಎಂಬುವವರ […]











